Friday 13 March 2015

ಯುಗಾದಿಗೆ ಹೋಳಿಗೆ ಬೇಕೇ? ಅಥವಾ ಯುಗಾದಿಗೂ ಮೊದಲು ಮತ್ತು ನಂತವರೂ ಬೇಕೇ?



ಕಾಯಿ ಹೋಳಿಗೆ ಯಾರಿಗೆ ಇಷ್ಟವಿಲ್ಲ ಹೇಳಿ? ಹೆಚ್ಚು-ಕಮ್ಮಿ ಗಣಪ ಮೆಲ್ಲುವ ತೊಟ್ಟಿನ ಮೋದಕದ ರುಚಿಯಷ್ಟೇ ಸ್ವಾದವಿರುವ ಕಾಯಿ ಹೋಳಿಗೆಯನ್ನು ಬಾಯಲ್ಲಿ ಬಿಟ್ಟುಕೊಳ್ಳುತ್ತಿದ್ದರೆ ಹೊಟ್ಟೆಗೆ ಜಾರಿದ್ದೇ ತಿಳಿಯೋದಿಲ್ಲ; ಹೊಟ್ಟೆ ತುಂಬುವಷ್ಟು ತಿಂದರೂ ಮತ್ತೆ ಬೇಕೆನ್ನುವ ತಕರಾರು ನಾಲಿಗೆಯದ್ದು! ಸ್ವಾದಿಷ್ಟವಾದ ಕಾಯಿ ಹೋಳಿಗೆ ತಯಾರಿಸುವುದು ಎಲ್ಲರಿಗೂ ಕರಗತವಲ್ಲ; ಮಾಡುವ ವಿಧಾನ ಕೇಳಲು ಬಹಳ ಸುಲಭ; ಹದ ತಪ್ಪಿದರೆ ಮಾತ್ರ ಅದರ ರುಚಿ ಅಷ್ಟಕ್ಕಷ್ಟೆ. 

ತೆಂಗಿನ ಕಾಯಿ, ಕೊಬ್ಬರಿ, ಗೋಧಿ ಹಿಟ್ಟು, ಮೈದಾ ಹಿಟ್ಟು, ಚಿರೋಟಿ ರವೆ,  ಯಾಲಕ್ಕಿ,  ಗಸಗಸೆ, ಎಣ್ಣೆ/ತುಪ್ಪ ಇವಿಷ್ಟನ್ನು ಇಟ್ಟುಕೊಂಡರೆ ಗೊತ್ತಾದ ಪ್ರಮಾಣದಲ್ಲಿ-ಕ್ರಮದಲ್ಲಿ ಮಿಶ್ರಣ ಮಾಡಿ ರೆಡಿ ಮಾಡಬಹುದು.

ಕಾಯಿ ತುರಿಯನ್ನು ನೀರು ಸೇರಿಸದೇ ರುಬ್ಬಿ ಬೆಲ್ಲ ಸೇರಿಸಿ ಬಾಣಲೆಯಲ್ಲಿ ಬಾಡಿಸಿ ಏಲಕ್ಕಿ ಪುಡಿ, ಒಣಕೊಬ್ಬರಿ ಬೆರೆಸಿ ಸಾಮಾನ್ಯ ಲಿಂಬೆ ಗಾತ್ರದ ಉಂಡೆಗಳನ್ನು ಮಾಡಿಕೊಳ್ಳಿ. ಗೋಧಿ ಮತ್ತು ಮೈದಾ ಹಿಟ್ಟನ್ನು ಎಣ್ಣೆ ಹಾಕಿ ಹದವಾಗಿ ಕಲಸಿಕೊಂಡು, ಹಿಟ್ಟನ್ನು ನಿಂಬೆ ಗಾತ್ರದಲ್ಲಿ ತೆಗೆದು ಬಟ್ಟಲಿ ಆಕಾರದಲ್ಲಿ ಹಿಡಿದುಕೊಂಡು ಹೂರಣದ ಉಂಡೆಯನ್ನು ತುಂಬಿ, ನಂತರ ಉಂಡೆ ಎಲ್ಲಾ ಭಾಗದಲೂ ಅದೇ ಹಿಟ್ಟಿನಿಂದ ಮುಚ್ಚುವಂತೆ ಮಾಡಬೇಕು. ಕಣಕ ಸೇರಿದ ಹೂರಣದ ಉಂಡೆಯನ್ನು ಲಟ್ಟಿಸಿ ಕಾದ ಕಾವಲಿಯ ಮೇಲೆ ತುಪ್ಪ/ಎಣ್ಣೆ ಬಳಸಿ ಬೇಯಿಸಬೇಕು.

ಕಾಯಿ ಹೋಳಿಗೆಯನ್ನು ಎರಡು ಮೂರು ವಿಧಾನದಲ್ಲಿ ಅಂದರೆ ಬೆಲ್ಲದ ಬದಲಿಗೆ ಸಕ್ಕರೆ ಮತ್ತು ಗೋದಿ ಹಿಟ್ಟಿನ ಬದಲಿಗೆ ಚಿರೋಟಿ ರವಾ ಸೇರಿಸಿ ತಯಾರಿಸುವವರೂ ಇದ್ದಾರೆ. ತಯಾರಿಸುವ ಗೋಜಲು ಬೇಡವೆಂದುಕೊಳ್ಳುವವರು ಭಟ್ ಹೋಳಿಗೆ ಮನೆಯನ್ನು ಸಂಪರ್ಕಿಸಿ ಕುಳಿತಲ್ಲೇ ತರಿಸಿಕೊಳ್ಳುತ್ತಾರೆ. 

ಈಗ ಸ್ವಲ್ಪ ಭಿನ್ನ ವಿಧಾನದಲ್ಲಿ ಕಾಯಿ ಹೋಳಿಗೆ ತಯಾರಿಸುವುದನ್ನು ತಿಳಿಯೋಣ:

ಮನೆಯಲ್ಲೇ ಸ್ವಲ್ಪ ಮಾತ್ರ ತಯಾರಿಸುವವರು ಸಣ್ಣಗೆ ತುರಿದ ಒಂದು ತೆಂಗಿನಕಾಯಿ, ಮುನ್ನೂರು ಗ್ರಾಂ ನಷ್ಟು ಬೆಲ್ಲ, ಒಂದೇ ಒಂದು  ಟೀ ಸ್ಪೂನ್ ಯಾಲಕ್ಕಿ ಪುಡಿ ಮತ್ತು  ಎರಡು ಟೀ ಸ್ಪೂನ್ ಅಕ್ಕಿ ಹಿಟ್ಟು ಇವಿಷ್ಟನ್ನು ಒಂದೆಡೆ ಇಟ್ಟುಕೊಳ್ಳಿ.

2 ಕಪ್ ಮೈದಾ ಹಿಟ್ಟು,  1 ಕಪ್ ಚಿರೋಟಿ ರವಾ, ಒಂದು ಟೀ ಸ್ಪೂನ್ ಅರಸಿನ ಪುಡಿ ಮತ್ತು  ಸ್ವಲ್ಪ  ತುಪ್ಪ/ಎಣ್ಣೆ  ಇವಿಷ್ಟನ್ನು ಕಣಕ ತಯಾರಿಸಲೆಂದು ರೆಡಿ ಮಾಡಿಕೊಳ್ಳಿ.

ತೆಂಗಿನ ತುರಿಯನ್ನು ಮಿಕ್ಸಿಯಲ್ಲಿ ಹಾಕಿ ಗಿರಗಿರನೆ ಎರಡು ಸುತ್ತು ತಿರುಗಿಸಿಟ್ಟುಕೊಳ್ಳಿ. ಒಂದು ಕಾವಲಿಯಲ್ಲಿ ತಿರುಗಿಸಿ ತೆಗೆದ ಕಾಯಿ ತುರಿ, ಬೆಲ್ಲ ಸೇರಿಸಿ ಪಾಕ ಬರುವವರೆಗೆ ಕೆದಕುತ್ತಿರಿ. ಪಾಕ ಸಿದ್ಧಗೊಂಡ ನಂತರ ಯಾಲಕ್ಕಿ ಪುಡಿ, ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಗೊಟಾಯಿಸಿಕೊಳ್ಳಬೇಕು. ನಂತರ ಸ್ಟವ್ ಆರಿಸಿ ಮಿಶ್ರಣ ತಣಿಯಲು ಬಿಡಿ. ತಣಿದ ಮಿಶ್ರಣವನ್ನು ನಿಂಬೆಯ ಗಾತ್ರಕ್ಕೆ ಉಂಡೆ ಮಾಡಿಕೊಳ್ಳಿ.

ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಚಿರೋಟಿ ರವಾ , ಅರಶಿನ ಪುಡಿ, ಎಣ್ಣೆ  ಸೇರಿಸಿ ಸ್ವಲ್ಪವೇ ಸ್ವಲ್ಪ ನೀರು ಹಾಕುತ್ತ ಕಲಸಿಕೊಳ್ಳಿ. ಹಿಟ್ಟು ದೋಸೆ ಹಿಟ್ಟಿನಂತೆ ಜೋನಿಯಾಗದೆ ಚಪಾತಿ ಹಿಟ್ಟಿನ ಹದಕ್ಕಿರಲಿ. ಈ ಮಿಶ್ರಣವನ್ನು ಅರ್ಧ ಘಂಟೆ ಹಾಗೇ ಬಿಡಿ.

ನಾದಿದ ಕಣಕದ ಹಿಟ್ಟನ್ನು ಗೋಲಿ ಗಾತ್ರದಲ್ಲಿ ಉಂಡೆಮಾಡಿ ಕೈಗೆ ಎಣ್ಣೆ ಸವರಿಕೊಂಡು, ಕಣಕದ ಉಂಡೆಯನ್ನು ಬಟ್ಟಲೊಳಗಿನ ಹಳ್ಳದ ಆಕಾರಕ್ಕೆ ತಂದುಕೊಂಡು ನಡುವೆ ಹೂರಣದ ಉಂಡೆ ಇರಿಸಿ ತಿರುಗಿಸಿ ಭದ್ರವಾಗಿ ಮುಚ್ಚಿರಿ.

ಹೂರಣ ತುಂಬಿದ ಕಣಕದ ಉಂಡೆಗಳನ್ನು ಒಂದೊಂದರಂತೆ ತೆಳ್ಳಗೆ ಲಟ್ಟಿಸಿ ಕಾದ ತವದ ಮೇಲೆ ಹಾಕಿ ಎರಡೂ ಬದಿಗಳನ್ನು ಚೆನ್ನಾಗಿ ಬೇಯಿಸಿ ಆರಲು ಬಿಡಿ.

ಕಾಯಿ ಹೋಳಿಗೆ ತಯಾರಿಸಲು ಸುಮಾರು ಒಂದು ಘಂಟೆಯ ಅವಧಿ ಬೇಕು. ಸರಿಯಾಗಿ ಸಿದ್ಧಗೊಂಡ ಕಾಯಿ ಹೋಳಿಗೆಗಳು ಎಂಟು ದಿನಗಳಾದರೂ ಚೆನ್ನಾಗಿರುತ್ತವೆ.

ನೀವು ಬೆಂಗಳೂರಿಗರಾದರೆ, ಕುಳಿತಲ್ಲೇ ಅರ್ಜೆಂಟಾಗಿ ಕಾಯಿ ಅಥವಾ ಬೇಳೆ ಹೋಳಿಗೆ, ಕಜ್ಜಾಯ ಇತ್ಯಾದಿ ತಿನಿಸುಗಳು ಬೇಕೆಂದರೆ ಮೊಬೈಲ್ ಹಿಡಿದು ಕೊಂಡು ಕೆಳಗಿನ ನಂಬರ್ ಒತ್ತಿ: 9901427992
ಭಟ್ ಹೋಳಿಗೆಮನೆ,

# 8,.[ಹೊಸ ನಂ.27, 8ನೇ ಮುಖ್ಯರಸ್ತೆ, ಮಹಾಬಲೇಶ್ವರ ದೇವಸ್ಥಾನದ ಹತ್ತಿರ, ಗಣೇಶ ಬ್ಲಾಕ್, ಮಹಾಲಕ್ಷ್ಮಿ ಲೇ ಔಟ್, ಬೆಂಗಳೂರು-560096


ಚರದೂರವಾಣಿ: 9901427992   ಸ್ಥಿರದೂರವಾಣಿ:080-23490959
ಈ ಮೇಲ್ : srinivasyadu@gmail.com 


[ಮುಂಗಡ ಆರ್ಡರ್‌ಗಳನ್ನು ತೆಗೆದುಕೊಳ್ಳಲಾಗುತ್ತದೆ, ಎಷ್ಟೇ ಪ್ರಮಾಣದಲ್ಲಿ ಹೋಳಿಗೆ ಬೇಕಾದರೂ ಒದಗಿಸಲಾಗುತ್ತದೆ.]



No comments:

Post a Comment